2 ಸಮುವೇಲನು 2 : 1 (KNV)
ಇದಾದ ಮೇಲೆ ದಾವೀದನು ಕರ್ತನನ್ನು -- ಯೆಹೂದದ ಪಟ್ಟಣಗಳಲ್ಲಿ ಯಾವದಕ್ಕಾದರೂ ಹೋಗಲೋ ಎಂದು ಕೇಳಿದನು. ಕರ್ತನು ಅವನಿಗೆ--ಹೋಗು ಅಂದನು. ದಾವೀ ದನು--ನಾನು ಎಲ್ಲಿಗೆ ಹೋಗಲಿ ಎಂದು ಕೇಳಿದಕ್ಕೆ ಆತನು -- ಹೆಬ್ರೋನಿಗೆ ಅಂದನು.
2 ಸಮುವೇಲನು 2 : 2 (KNV)
ಹಾಗೆಯೇ ದಾವೀದನೂ ಅವನ ಇಬ್ಬರು ಹೆಂಡತಿಯರಾದ ಇಜ್ರೇಲಿಯವಳಾಗಿರುವ ಅಹಿನೋವಮಳೂ ಕರ್ಮೆ ಲ್ಯನನಾದ ನಾಬಾಲನ ಹೆಂಡತಿಯಾಗಿದ್ದ ಅಬೀ ಗೈಲಳೂ ಅಲ್ಲಿಗೆ ಹೋದರು.
2 ಸಮುವೇಲನು 2 : 3 (KNV)
ಇದಲ್ಲದೆ ತನ್ನ ಸಂಗಡ ಇದ್ದ ಜನರನ್ನೂ ಅವರವರ ಮನೆಯವರನ್ನೂ ಕರಕೊಂಡು ಹೋದನು; ಅವರು ಹೆಬ್ರೋನಿನ ಪಟ್ಟಣ ಗಳಲ್ಲಿ ವಾಸವಾಗಿದ್ದರು.
2 ಸಮುವೇಲನು 2 : 4 (KNV)
ಆಗ ಯೆಹೂದ ಜನರು ಬಂದು ಅಲ್ಲಿ ದಾವೀದನನ್ನು ಯೆಹೂದನ ಮನೆಯವರ ಮೇಲೆ ಅರಸನನ್ನಾಗಿ ಅಭಿಷೇಕಿಸಿದರು.
2 ಸಮುವೇಲನು 2 : 5 (KNV)
ಯಾಬೇಷ್ಗಿಲ್ಯಾದಿನವರು ಸೌಲನನ್ನು ಹೂಣಿಟ್ಟ ರೆಂದು ದಾವೀದನಿಗೆ ತಿಳಿಸಿದಾಗ ಅವನು ದೂತರನ್ನು ಕಳುಹಿಸಿ--ನೀವು ನಿಮ್ಮ ಯಜಮಾನನಾದ ಸೌಲನಿಗೆ ಈ ದಯೆಯನ್ನು ತೋರಿಸಿ ಅವನನ್ನು ಹೂಣಿಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ.
2 ಸಮುವೇಲನು 2 : 6 (KNV)
ಈಗ ಕರ್ತನು ನಿಮಗೆ ದಯೆಯನ್ನೂ ಸತ್ಯವನ್ನೂ ತೋರಿಸಲಿ. ನೀವು ಈ ಕಾರ್ಯವನ್ನು ಮಾಡಿದ್ದರಿಂದ ನಾನು ನಿಮಗೆ ಪ್ರತ್ಯುಪಕಾರ ಮಾಡುವೆನು.
2 ಸಮುವೇಲನು 2 : 7 (KNV)
ನೀವು ಪರಾ ಕ್ರಮಶಾಲಿಗಳಾಗಿದ್ದು ನಿಮ್ಮ ಕೈಗಳು ಬಲವಾಗಿರಲಿ; ನಿಮ್ಮ ಯಜಮಾನನಾದ ಸೌಲನು ಸತ್ತುಹೋದನು; ಯೆಹೂದನ ಮನೆಯವರು ನನ್ನನ್ನು ತಮ್ಮ ಮೇಲೆ ಅರಸನನ್ನಾಗಿ ಅಭಿಷೇಕಮಾಡಿದರು ಅಂದನು.
2 ಸಮುವೇಲನು 2 : 8 (KNV)
ಆದರೆ ಸೌಲನ ಸೈನ್ಯಾಧಿಪತಿಯಾದ ನೇರನ ಮಗ ನಾಗಿರುವ ಅಬ್ನೇರನು ಸೌಲನ ಮಗನಾದ ಈಷ್ಬೋ ಶೆತನನ್ನು ಮಹನಯಿಮಿಗೆ ಕರಕೊಂಡು ಹೋಗಿ
2 ಸಮುವೇಲನು 2 : 9 (KNV)
ಅಲ್ಲಿ ಅವನನ್ನು ಗಿಲ್ಯಾದ್ಯರ ಮೇಲೆಯೂ ಆಶೇರ್ಯರ ಮೇಲೆಯೂ ಇಜ್ರೇಲಿಯರ ಮೇಲೆಯೂ ಎಫ್ರಾ ಯಾಮ್ಯರ ಮೇಲೆಯೂ ಬೆನ್ಯಾವಿಾನ್ಯರ ಮೇಲೆಯೂ ಇಸ್ರಾಯೇಲ್ಯರೆಲ್ಲರ ಮೇಲೆಯೂ ಅರಸನನ್ನಾಗಿ ಮಾಡಿ ದನು.
2 ಸಮುವೇಲನು 2 : 10 (KNV)
ಸೌಲನ ಮಗನಾದ ಈಷ್ಬೋಶೆತನು ಇಸ್ರಾಯೇಲಿನ ಮೇಲೆ ಆಳುವದಕ್ಕೆ ಆರಂಭಿಸಿದಾಗ ನಾಲ್ವತ್ತು ವರುಷ ಪ್ರಾಯದವನಾಗಿದ್ದು ಎರಡು ವರುಷ ಆಳಿದನು. ಆದರೆ ಯೆಹೂದನ ಮನೆಯವರು ದಾವೀದನನ್ನು ಹಿಂಬಾಲಿಸಿದರು.
2 ಸಮುವೇಲನು 2 : 11 (KNV)
ದಾವೀದನು ಹೆಬ್ರೋನಿನಲ್ಲಿ ಯೆಹೂದನ ಮನೆಯವರ ಮೇಲೆ ಅರಸನಾಗಿದ್ದ ದಿವಸಗಳು ಏಳು ವರುಷ ಆರು ತಿಂಗಳು.
2 ಸಮುವೇಲನು 2 : 12 (KNV)
ನೇರನ ಮಗನಾಗಿರುವ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಿ ನಿಂದ ಹೊರಟು ಗಿಬ್ಯೋನಿಗೆ ಬಂದರು.
2 ಸಮುವೇಲನು 2 : 13 (KNV)
ಹಾಗೆಯೇ ಚೆರೂಯಳ ಮಗನಾದ ಯೋವಾಬನೂ ದಾವೀದನ ಸೇವಕರೂ ಹೊರಟು ಗಿಬ್ಯೋನಿನ ಕೊಳದ ಬಳಿಯಲ್ಲಿ ಕೂಡಿಬಂದರು; ಅವರು ಕೊಳದ ಆಚೆಯಲ್ಲಿಯೂ ಇವರು ಕೊಳದ ಈಚೆಯಲ್ಲಿಯೂ ಕೂತುಕೊಂಡರು.
2 ಸಮುವೇಲನು 2 : 14 (KNV)
ಆಗ ಅಬ್ನೇರನು ಯೋವಾಬನಿಗೆ--ಯೌವನಸ್ಥರು ಎದ್ದು ನಮ್ಮ ಮುಂದೆ ಆಡಲಿ ಅಂದನು. ಅದಕ್ಕೆ ಯೋವಾಬನು--ಅವರು ಏಳಲಿ ಅಂದನು.
2 ಸಮುವೇಲನು 2 : 15 (KNV)
ಹಾಗೆ ಯೇ ಸೌಲನ ಮಗನಾದ ಈಷ್ಬೋಶೆತನ ಕಡೆಯವ ರಾದ ಬೆನ್ಯಾವಿಾನ್ಯರಲ್ಲಿ ಹನ್ನೆರಡು ಮಂದಿಯೂ ದಾವೀದನ ಸೇವಕರಲ್ಲಿ ಹನ್ನೆರಡು ಮಂದಿಯೂ ಎದ್ದು ಹೊರಟು ಒಬ್ಬರ ತಲೆಯನ್ನು ಒಬ್ಬರು ಹಿಡಿದು ಒಬ್ಬರ ಪಕ್ಕೆಯಲ್ಲಿ ಒಬ್ಬರು ಕತ್ತಿಯನ್ನು ತಿವಿದು ಎಲ್ಲರೂ ಸತ್ತುಹೋದರು.
2 ಸಮುವೇಲನು 2 : 16 (KNV)
ಆದದರಿಂದ ಗಿಬ್ಯೋನಿ ನಲ್ಲಿರುವ ಆ ಸ್ಥಳಕ್ಕೆ ಹೆಲ್ಕಚ್ಚೂರಿಮ್ ಎಂಬ ಹೆಸರಾ ಯಿತು.
2 ಸಮುವೇಲನು 2 : 17 (KNV)
ಇದಲ್ಲದೆ ಆ ದಿನದಲ್ಲಿ ಅಘೋರವಾದ ಯುದ್ಧವಾಯಿತು. ಅಬ್ನೇರನೂ ಇಸ್ರಾಯೇಲ್ ಜನ ರೂ ದಾವೀದನ ಸೇವಕರಿಂದ ಹೊಡೆಯಲ್ಪಟ್ಟರು.
2 ಸಮುವೇಲನು 2 : 18 (KNV)
ಚೆರೂಯಳ ಮೂವರು ಮಕ್ಕಳಾದ ಯೋವಾ ಬನೂ ಅಬಿಷೈಯೂ ಅಸಾಹೇಲನೂ ಅಲ್ಲಿ ಇದ್ದರು. ಅಸಾಹೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು.
2 ಸಮುವೇಲನು 2 : 19 (KNV)
ಅಸಾಹೇಲನು ಅಬ್ನೇರನನ್ನು ಹಿಂದಟ್ಟಿ ಅಬ್ನೇರನನ್ನು ಹಿಂದಟ್ಟುವದರಲ್ಲಿ ಬಲಗಡೆ ಗಾದರೂ ಎಡಗಡೆಗಾದರೂ ತಿರುಗದೆ ಇದ್ದನು.
2 ಸಮುವೇಲನು 2 : 20 (KNV)
ಆದದರಿಂದ ಅಬ್ನೇರನು ಹಿಂದಕ್ಕೆ ತಿರುಗಿ ನೋಡಿನೀನು ಅಸಾಹೇಲನಲ್ಲವೇ ಅಂದನು.
2 ಸಮುವೇಲನು 2 : 21 (KNV)
ಅದಕ್ಕವನುನಾನೇ ಅಂದನು. ಆಗ ಅಬ್ನೇರನು ಅವನಿಗೆ--ನೀನು ಬಲಗಡೆಗಾದರೂ ಎಡಗಡೆಗಾದರೂ ತಿರುಗಿ ಯೌವ ನಸ್ಥರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತಕ್ಕೋ ಅಂದನು. ಆದರೆ ಅಸಾಹೇಲನು ಅವನ ಹಿಂದಿನಿಂದ ತಿರುಗಲೊಲ್ಲದೆ ಇದ್ದನು.
2 ಸಮುವೇಲನು 2 : 22 (KNV)
ಅಬ್ನೇರನು ಅಸಾಹೇಲನಿಗೆ--ನೀನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ತಿರುಗಿ ಹೋಗು; ನಾನು ನಿನ್ನನ್ನು ನೆಲಕ್ಕೆ ಹೊಡೆದು ಬಿಡುವದು ಯಾಕೆ? ನಾನು ನಿನ್ನ ಸಹೋ ದರನಾದ ಯೋವಾಬನಿಗೆ ಮುಖತೋರಿಸುವದು ಹೇಗೆ ಅಂದನು.
2 ಸಮುವೇಲನು 2 : 23 (KNV)
ಆದರೆ ಅವನು ಹೋಗುವದಕ್ಕೆ ಒಪ್ಪದೆಹೋದದರಿಂದ ಅಬ್ನೇರನು ತನ್ನ ಬರ್ಜಿಯ ಹಿಂಭಾಗದ ಮೊನೆಯಿಂದ ಅವನ ಪಕ್ಕೆಯ ಐದನೇ ಎಲುಬಿನ ಕೆಳಗೆ ಹಾಯುವಂತೆ ತಿವಿದನು; ಅದು ಅವನ ಹಿಂದಿನಿಂದ ಹೊರಗೆ ಬಂತು. ಅವನು ಅಲ್ಲಿ ಬಿದ್ದು ಅದೇ ಸ್ಥಳದಲ್ಲಿ ಸತ್ತನು. ಆಗ ಏನಾಯಿಯತಂದರೆ ಅಸಾಹೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.
2 ಸಮುವೇಲನು 2 : 24 (KNV)
ಆದರೆ ಯೋವಾ ಬನೂ ಅಬಿಷೈಯೂ ಅಬ್ನೇರನನ್ನು ಹಿಂದಟ್ಟಿ ಸೂರ್ಯಅಸ್ತಮಿಸುವ ವರೆಗೆ ಗಿಬ್ಯೋನಿನ ಅರಣ್ಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದ ಮಟ್ಟಿಗೂ ಬಂದರು.
2 ಸಮುವೇಲನು 2 : 25 (KNV)
ಆಗ ಅಬ್ನೇರನ ಹಿಂದೆ ಬೆನ್ಯಾವಿಾನನ ಮಕ್ಕಳು ಒಟ್ಟಾಗಿ ಬಂದು ಸೈನ್ಯವಾಗಿ ಕೂಡಿಕೊಂಡು ಒಂದು ಗುಡ್ಡದ ಶಿಖರದಲ್ಲಿ ನಿಂತಿದ್ದರು.
2 ಸಮುವೇಲನು 2 : 26 (KNV)
ಆಗ ಅಬ್ನೇರನು ಯೋವಾಬನಿಗೆ--ಕತ್ತಿಯು ಯಾವಾಗಲೂ ನುಂಗಿಬಿಡುವದೋ? ಅಂತ್ಯ ದಲ್ಲಿ ಅದು ಕಹಿಯಾಗಿರುವದೆಂದು ನಿನಗೆ ಗೊತ್ತಾಗು ವದಿಲ್ಲವೋ? ತಮ್ಮ ಸಹೋದರರನ್ನು ಹಿಂಬಾಲಿಸು ವದನ್ನು ಬಿಟ್ಟು ಹಿಂದಕ್ಕೆ ತಿರುಗುವ ಹಾಗೆ ಜನರಿಗೆ ಎಷ್ಟು ಕಾಲ ಹೇಳದೆ ಇರುವಿ ಎಂದು ಕೂಗಿ ಹೇಳಿದನು.
2 ಸಮುವೇಲನು 2 : 27 (KNV)
ಅದಕ್ಕೆ ಯೋವಾಬನು--ದೇವರ ಜೀವದಾಣೆ, ಉದಯದಲ್ಲಿ ನೀನು ಮಾತನಾಡದೆ ಹೋದರೆ ನಿಶ್ಚಯ ವಾಗಿ ಜನರಲ್ಲಿ ಪ್ರತಿ ಮನುಷ್ಯನು ತನ್ನ ಸಹೋ ದರನ ಹಿಂದಿನಿಂದ ತಿರುಗಿ ಹೋಗುತ್ತಿದ್ದನು ಅಂದನು.
2 ಸಮುವೇಲನು 2 : 28 (KNV)
ಹೀಗೆ ಯೋವಾಬನು ತುತೂರಿಯನ್ನು ಊದಿ ದನು. ಆಗ ಜನರೆಲ್ಲರೂ ನಿಂತರು. ಇಸ್ರಾಯೇಲನ್ನು ಹಿಂದಟ್ಟಲಿಲ್ಲ ಮತ್ತು ಯುದ್ಧಮಾಡಲಿಲ್ಲ.
2 ಸಮುವೇಲನು 2 : 29 (KNV)
ಅಬ್ನೇ ರನೂ ಅವನ ಜನರೂ ಆ ರಾತ್ರಿಯೆಲ್ಲಾ ಬೈಲಿನಲ್ಲಿ ನಡೆದು ಯೊರ್ದನನ್ನು ದಾಟಿ ಬಿಥ್ರೋನಿನಲ್ಲೆಲ್ಲಾ ಹಾದು ಮಹನಯಿಮಿಗೆ ಬಂದರು.
2 ಸಮುವೇಲನು 2 : 30 (KNV)
ಯೋವಾಬನು ಅಬ್ನೇರನ ಹಿಂದಿನಿಂದ ತಿರುಗಿ ಜನರೆಲ್ಲರನ್ನು ಕೂಡಿಸಿಕೊಂಡಾಗ ದಾವೀದನ ಸೇವಕ ರಲ್ಲಿ ಹತ್ತೊಂಭತ್ತು ಜನರೂ ಅಸಾಹೇಲನೂ ಕಡಿಮೆ ಯಾಗಿದ್ದರು.
2 ಸಮುವೇಲನು 2 : 31 (KNV)
ಆದರೆ ದಾವೀದನ ಸೇವಕರು ಬೆನ್ಯಾ ವಿಾನ್ಯರಲ್ಲಿಯೂ ಅಬ್ನೇರನ ಜನರಲ್ಲಿಯೂ ಮುನ್ನೂರ ಅರವತ್ತು ಜನರನ್ನು ಹೊಡೆದದ್ದರಿಂದ ಅವರು ಸತ್ತರು.
2 ಸಮುವೇಲನು 2 : 32 (KNV)
ಅವರು ಅಸಾಹೇಲನನ್ನು ಎತ್ತಿ ಕೊಂಡು ಬೇತ್ಲೆಹೇಮಿನಲ್ಲಿರುವ ಅವನ ತಂದೆಯ ಸಮಾಧಿಯಲ್ಲಿ ಹೂಣಿಟ್ಟರು. ಯೋವಾಬನೂ ಅವನ ಜನರೂ ರಾತ್ರಿಯೆಲ್ಲಾ ನಡೆದು ಉದಯವಾದಾಗ ಹೆಬ್ರೋನಿಗೆ ಬಂದರು.
❮
❯